ಉದುಂಬರ: 1 ಅತ್ತಿಮರ. ಪವಿತ್ರವೆಂದು ಪರಿಗಣಿಸಲಾಗಿರುವ ಇದರ ಉಪಯೋಗ ಯಜ್ಞ ಯಾಗಾದಿ ವೇದವಿಹಿತ ಕರ್ಮಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಕ್ಷೀರವೃಕ್ಷ, ಹೇಮದುಗ್ಧ, ಸದಾಫಲ, ಕಾಲಸ್ಕಂಧ, ಯಜ್ಞಯೋಗ್ಯ, ಯಜ್ಞೀಯ, ಸುಪ್ರತಿಷ್ಠಿತ, ಶೀತವಲ್ಕ, ಜಂತುಫಲ, ಪುಷ್ಪಶೂನ್ಯ, ಪವಿತ್ರಕ, ಸೌಮ್ಯ, ಶೀತಫಲ-ಇವು ಪರ್ಯಾಯ ಶಬ್ದಗಳು. 2 ಹೊಸ್ತಿಲು. 3 ಕುಷ್ಠರೋಗ. 4 ತಾಮ್ರ.	(ಬಿ.ಕೆ.ಎಸ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ